ಶನಿವಾರ, ಜನವರಿ 16, 2010

ನೆರಳು ಬೆಳಕಿನಾಟ

ದಿನದ ನೆರಳು ಬೆಳಕಿನಾಟದಲ್ಲಿ

ನಾನು ಕಳೆದು ಹೋಗಿದ್ದೇನೆ !

ಹುಟ್ಟುವ ಸೂರ್ಯನೊಂದಿಗೆ

ನಿಸುತ್ತ,

ನನ್ನದೆಲ್ಲವ ಗುಣಿಸಿ ಭಾಗಿಸಿ

ಬಂದ ಮೊತ್ತದಲ್ಲಿ

ಕಾಲು ಚಾಚಿದ್ದೇನೆ .

ಆಕಾಶವೋ ಅಷ್ಟೆತ್ತರ

ಕೈಗೆಟುಕದು.

ಇರುವ ಭೂಮಿ

ಕಣ್ಣು ಹಾಯದು ,

ಮಲಗಿದ್ದೇನೆ ಮುಸುಗಿಟ್ಟು.

ತಟ್ಟದಿರಲಿ

ಜಗದ ಸೆಳವು.

ಮುಚ್ಚಿದ ಕಣ್ಣ ತೆರಸದಿರಿ

ಕಳೆದು ಹೋದಾವು

ಕಣ್ಣಂಚಿನ ಕನಸು

ಏರಿದ ಕಾಮನಬಿಲ್ಲಿನಲ್ಲಿಯ

ಸೊಬಗು

ಅಂತೆ ಕಣ್ಣಂಚಿನ

ನೀರಹನಿ.