ಭಾನುವಾರ, ಸೆಪ್ಟೆಂಬರ್ 5, 2010

ಕೈಮರ 
ದಿನ ದಿನವು ನಡೆದು ಬಂದು
ನಿಂತಿದ್ದೇನೆ  ಕೂಡು ರಸ್ತೆಯ  ಮದ್ಯೆ.

ಮುಂದೆ ಹತ್ತಾರು ದಾರಿಗಳು
ದಾರಿ ತಪ್ಪಿಸುತ್ತಿವೆ
ಎಲ್ಲಿಗೋಗಲಿ' ಎಲ್ಲಿಸಾಗುತ್ತಿವೆ ಈ ದಾರಿಗಳು?

ಕೈಮರದ ಕೆಳಗೆ ನಿಂತಿದ್ದೇನೆ ಒಂಟಿಯಾಗಿ,
ದಾರಿಹೋಕರಿಲ್ಲ,
ದಾರಿತೋರುವರಿಲ್ಲ,
ನನ್ನಳವು ಕೇಳುವರಿಲ್ಲ.
ಬಯಸಿದ್ದೇನೆ  ಸಾಗಲು
ದಾರಿಗಳು ಹತ್ತಾರು
ಹೇಗೆ ಸಾಗಲಿ?

ಅಲ್ಲಿ ಇಲ್ಲಿ ಎಲ್ಲೆಲ್ಲು
ದಾರಿಗಳು
ಎಲ್ಲೆಲ್ಲು ನನ್ನದೇ
ಗುರಿ
ದಶದಿಕ್ಕು ತೋರುತ್ತಿದೆ
ಜಗದಳವು.

ಮುಂದೆ ನಿಂತಿದೀ
ಬಯಲು ನನ್ನಳಗೊಂದಾಗಿ ,
ಎಲ್ಲೆಲ್ಲು  ಜಗಮಗಿಸುವ ದೀಪವಾಗಿ.
ನಾನು ನಾನಾಗಿ ,
ಸರ್ವವು ಅಯೋಮಯವಾಗಿ
ಆದಿ ಅಂತ್ಯವಿಲ್ಲದಾ
ದಿಕ್ಕಾಗಿ  ಅಯ್ಕ್ಯವಾಗಿದೆ .

ಎಲ್ಲಿ ಹೋಗಲಿ ನಾನು?