ಭಾನುವಾರ, ಜೂನ್ 20, 2010

NIMMA NADUVINA NAANU

ಕೋಟಿ ಜನರ ಮದ್ಯೆ  ಒಂಟಿಯಾಗಿದ್ದೇನೆ,
ಧಾವಿಸುವ ನದಿಯಲ್ಲಿನ ಬಿಂದುವಾಗಿದ್ದೇನೆ,
ಉರಿವ ಸೂರ್ಯನಲ್ಲಿಯ ಕಿಡಿಯಾಗಿದ್ದೇನೆ,
ಆದರೂ ನಾನು ನಾನಾಗಿದ್ದೇನೆ.

ಕಿವಿಗೊಟ್ಟು ಕೇಳಿ,
ನಾನು ಮಾತನಾಡುವುದಿಲ್ಲ,
ಕಥೆ ಹೇಳುವುದಿಲ್ಲ ,
ಮೌನದೊಂದಿಗೆ
ಮೌನಿಯಾಗಿದ್ದೇನೆ.

ಅಲ್ಲಿದಿಲ್ಲಿಯ ಮಾತು,
ಪಿಸುಗುಟ್ಟುವ ಗಾಳಿ,
ನಿತ್ಯವೂ ಸತ್ತುಬದುಕುವ,
ಅನಿವಾರ್ಯತೆ,
ಸುತ್ತ ಸುಳಿಯುವ ನೆನಪು,
ಅತ್ತುಕರೆಯುವ ಗೋಳು ,
ಅದೇ ಸ್ವರ್ಗ ನರಕಗಳ
ಉರಿವ ಹಣತೆ .

ಹುಡುಕದಿರಿ ನನ್ನನ್ನ
ಕೋಟಿ ಜನಗಳ ಮದ್ಯೆ
ಎಲ್ಲಿಯೂ ಬಿಟ್ಟಿಲ್ಲ ಹೆಜ್ಜೆ ಗುರುತು .
ಉರಿವ ಚಿತೆಗಳ ಮದ್ಯೆ
ಭಸ್ಮವಾಗಿಹ ನೆನಪು,
ಗೋರಿಗಳ  ಮಣ್ಣಲ್ಲಿ
ಕರಗಿಹೋಗಿ.

ಅಲ್ಲಿಲ್ಲಿ  ಯಾಕೆ ?
ನಿಮ್ಮನಡುವಿದ್ದೇನೆ
ನಿಮ್ಮಲ್ಲಿಯೇ ಇದ್ದೇನೆ,
ಸದಾ ಒಂಟಿಯಾಗಿ.

belaginondige

ಕೋಳಿ ಕೂಗಿನೋದಿಗೆ ಬೆಳಗಾಯಿತೋ,
ಬೆಳಿಗ್ಗೆ ಕೋಳಿ ಕೂಗಿತೋ,
ಬೆಳಗಾಗಿತ್ತು!
ಸೂರ್ಯ ಮೂಡಿದ್ದ ,
ರಾತ್ರಿ ಮುಗಿದ ಮೇಲಿನ ಬೆಳಗು,
ನಿದ್ರೆ ಮುಗಿದ
ಜಗದಳವು.

ಮೈ ಮುರಿಯಲ್ಲಿಲ್ಲ
ಮೈ ಮರೆಯಲಿಲ್ಲ
ಡಂಗುರ ಸಾರಲಿಲ್ಲ,
ದಾರಿ ಕಾಯಲಿಲ್ಲ
ದಾರಿ ಕೇಳಲಿಲ್ಲ
ಬೆಳಗಾಗಿದೆ.


ದಿನವೊಂದು ಉದಯಿಸಿದೆ,
ದಿನವೊಂದು ಮರಣಿಸಿದೆ,
ಹಳೆಯದರೊಂದಿಗೆ
ಹೊಸತುದಯಿಸಿದೆ.

ಎಲ್ಲವೂ ಹೊಸತು ಎಲ್ಲವೂ ಹಳತು ,
ನಿನ್ನೆಯೊಂದಿಗಿನ
ಬದಕು ಸೊಗಸು.
ರಾತ್ರಿ ಕಂಡಂತಹ ಭಾವಿ
ಹಗಲು ಧುಮುಕುವ
ಕನಸು.

ಬನ್ನಿ ಬದುಕೋಣ,
ಹೊಸ ದಿನಗಳೊಂದಿಗೆ,
ಹಳೆಯ ನೆನಪುಗಳೊಂದಿಗೆ.
ಇಂದಿಗೆ ಮುಗಿದಿಲ್ಲ ,
ನಾಳೆಗೆ ನಿಲ್ಲದು
ಮೊಗೆದಷ್ಟು
ಮುಗಿಯದ ಶರಧಿ.

ಮತ್ತೆ ರಾತ್ರಿಯಾಗುತ್ತಿದೆ ,
ಬೆಳಗಾಗಲು.