ಶುಕ್ರವಾರ, ಡಿಸೆಂಬರ್ 25, 2009

ಕನಸು

"ನಾನು ನನ್ನ ಕನಸುಗಳನ್ನು ಮಾರುತ್ತೇನೆ "
ಘೋಷಿಸಿದನವನೋಬ್ಬ ,
"ಆಹಾ ' ಎಷ್ಟೊಂದು ಖುಷಿ
ನಿನ್ನರವಿನ ಪರಿಧಿಯೊಳಗೆ ನುಸುಳಲು "
ಉದ್ಗರಿಸಿದೆ.

ಜೀವನ

ಒಂದು ಮುಂಜಾನೆ ಎಳೆ ಹುಲ್ಲಿನ ಮೇಲಿನ ಇಬ್ಬನಿ ಉದ್ಗರಿಸಿತು ,
"ಆಹಾ!ಎಂತಹ ಸುಂದರ ಮುಂಜಾವು,"
ಬಿಸಿಲು ಬೆಳೆದಂತೆ ಮಾಯವಾಯಿತು ಹನಿ,
ನಮ್ಮ ಜೀವನದಂತೆ.