ನನ್ನೊಲವಿನ ಕವನ
ಹೃದಯದೊಳಗಿನ ಮಾತು
ನನ್ನೊಂದಿಗಿನ ಪಯಣ .
ಅಲ್ಲಿ ಇಲ್ಲಿ ನೋಡುವಾಗ
ನನ್ನೊಳಗೆ ನಾನು ನೋಡುವಾಗ
ಜಗದ ನಿಯಮ ಮೀರಿ
ನಡೆಯುವಾಗ,
ನನ್ನೊಳಗೆ ಕವನ ಹುಟ್ಟುತ್ತದೆ!
ಮನಸಿನಂಗಳದಲ್ಲಿ ಹುಟ್ಟಿದ ಮಗು
ಹೃದಯದನ್ಗಳದಲ್ಲಿಳಿದು,
ಅಂಬೆಗಾಲಿಕ್ಕಿ
ನನ್ನೊಳಗೆಲ್ಲ ಬೆಳೆದು
ಉಸಿರಾಗುತಲಿ
ನನ್ನದಾಗುತ್ತದೆ.
ನನ್ನ ಕೈ ಹಿಡಿದು
ನನ್ನೊಂದಿಗೆ ಸಾಗುವಾಗ
ಮೋಹ ಹುಟ್ಟುತ್ತದೆ,
ಹೇಳಿ ನಿಮ್ಮ ಕೈಯಲ್ಲಿಡಲೇ
ನನ್ನ ಮುದ್ದು ಮಗುವ?