ಶುಕ್ರವಾರ, ಆಗಸ್ಟ್ 6, 2010

NANNA KAVANA

ನನ್ನೊಲವಿನ ಕವನ
ಹೃದಯದೊಳಗಿನ  ಮಾತು
ನನ್ನೊಂದಿಗಿನ ಪಯಣ .

ಅಲ್ಲಿ ಇಲ್ಲಿ ನೋಡುವಾಗ 
ನನ್ನೊಳಗೆ ನಾನು ನೋಡುವಾಗ
ಜಗದ ನಿಯಮ ಮೀರಿ
ನಡೆಯುವಾಗ,
ನನ್ನೊಳಗೆ ಕವನ ಹುಟ್ಟುತ್ತದೆ!

ಮನಸಿನಂಗಳದಲ್ಲಿ  ಹುಟ್ಟಿದ ಮಗು
ಹೃದಯದನ್ಗಳದಲ್ಲಿಳಿದು,
ಅಂಬೆಗಾಲಿಕ್ಕಿ  
ನನ್ನೊಳಗೆಲ್ಲ ಬೆಳೆದು
ಉಸಿರಾಗುತಲಿ
ನನ್ನದಾಗುತ್ತದೆ.

ನನ್ನ ಕೈ ಹಿಡಿದು
ನನ್ನೊಂದಿಗೆ ಸಾಗುವಾಗ
ಮೋಹ ಹುಟ್ಟುತ್ತದೆ,
ಹೇಳಿ ನಿಮ್ಮ ಕೈಯಲ್ಲಿಡಲೇ
ನನ್ನ ಮುದ್ದು ಮಗುವ?

6 ಕಾಮೆಂಟ್‌ಗಳು:

  1. ನಮ್ಮ ಕೈನಲ್ಲಿ ಇಟ್ಟ ಈ ಮಗುವಂತೂ ಸುಂದರವಾಗಿದೆ ಗಣಪತಿ ಭಟ್ ರವರೆ...

    ಪ್ರತ್ಯುತ್ತರಅಳಿಸಿ
  2. ಜಿ.ಜಿ.ಹೆಗ್ಡೆ ಯವರೇ ;ನಿಮ್ಮ ಈ ಮುದ್ದು ಮಗು ಸುಂದರವಾಗಿದೆ.ನಿಮ್ಮ ಬ್ಲಾಗಿನಲ್ಲಿ ಹೆಚ್ಚು ಕವನಗಳು ಬರಲಿ.ನನ್ನ ಬ್ಲಾಗಿಗೂ ಭೇಟಿ ಕೊಡಿ.

    ಪ್ರತ್ಯುತ್ತರಅಳಿಸಿ
  3. ಚಂದದ ಕವನ........
    ಮಗುವಿನ ಚಿತ್ರ ಮುದ್ದಾಗಿದೆ.
    ಇನ್ನಷ್ಟು ಕವನಗಳು ಬರಲಿ..........

    ಪ್ರತ್ಯುತ್ತರಅಳಿಸಿ
  4. ನಿನ್ನ ಕವನ, ನಿನ್ನ ಕೈ ಹಿಡಿದು ನಡೆಯುವ ದೃಶ್ಯ ನಮಗೂ ಮುದ ನೀಡಿದೆ..ದೋಸ್ತ, ಹೀಗೇಯೇ ನಿನ್ನ ಮನದಂಗಳ ಕವನ-ನಂದನ ವನವಾಗಲಿ.

    ಪ್ರತ್ಯುತ್ತರಅಳಿಸಿ
  5. ನಿಮ್ಮ ಮುದ್ದು ಮಗುವಿನ ಕವನ ಚನ್ನಾಗಿದೆ. ಮಕ್ಕಳು ಕೈ ಹಿಡಿದು ನಡೆದಾಗ ಆರಂಭದ ಸಂತೋಷ ನಮ್ಮನ್ನು ಮಗುವಾಗಿಸುತ್ತದೆ. ನಿನ್ನಷ್ಟು ಕವನ ನಿಮ್ಮಿಂದ ಮೂಡಲಿ. ಹಾಗೇಯೆ ನಿಮಗೆ ಸಮಯ ಸಿಕ್ಕಾಗ ನನ್ನ ಬ್ಲಾಗಿಗು ಬೇಟಿ ಕೊಡಿ

    ಪ್ರತ್ಯುತ್ತರಅಳಿಸಿ