ಶನಿವಾರ, ಜನವರಿ 16, 2010

ನೆರಳು ಬೆಳಕಿನಾಟ

ದಿನದ ನೆರಳು ಬೆಳಕಿನಾಟದಲ್ಲಿ

ನಾನು ಕಳೆದು ಹೋಗಿದ್ದೇನೆ !

ಹುಟ್ಟುವ ಸೂರ್ಯನೊಂದಿಗೆ

ನಿಸುತ್ತ,

ನನ್ನದೆಲ್ಲವ ಗುಣಿಸಿ ಭಾಗಿಸಿ

ಬಂದ ಮೊತ್ತದಲ್ಲಿ

ಕಾಲು ಚಾಚಿದ್ದೇನೆ .

ಆಕಾಶವೋ ಅಷ್ಟೆತ್ತರ

ಕೈಗೆಟುಕದು.

ಇರುವ ಭೂಮಿ

ಕಣ್ಣು ಹಾಯದು ,

ಮಲಗಿದ್ದೇನೆ ಮುಸುಗಿಟ್ಟು.

ತಟ್ಟದಿರಲಿ

ಜಗದ ಸೆಳವು.

ಮುಚ್ಚಿದ ಕಣ್ಣ ತೆರಸದಿರಿ

ಕಳೆದು ಹೋದಾವು

ಕಣ್ಣಂಚಿನ ಕನಸು

ಏರಿದ ಕಾಮನಬಿಲ್ಲಿನಲ್ಲಿಯ

ಸೊಬಗು

ಅಂತೆ ಕಣ್ಣಂಚಿನ

ನೀರಹನಿ.

4 ಕಾಮೆಂಟ್‌ಗಳು:

  1. ಅನುಭವ ಹೊದ್ದ ಪದಗಳು, ಪ್ರಬುದ್ಧತೆ ನಡೆಸಿದ ಸಾಲುಗಳು...ಗಣಪತಿ ಸರ್, ನನಗಂತೂ ನಿಮ್ಮ ಈ ಸಾಲುಗಳು...
    ಮುಚ್ಚಿದ ಕಣ್ಣ ತೆರಸದಿರಿ

    ಕಳೆದು ಹೋದಾವು
    ಕಣ್ಣಂಚಿನ ಕನಸು
    ಏರಿದ ಕಾಮನಬಿಲ್ಲಿನಲ್ಲಿಯ
    ಸೊಬಗು
    ಅಂತೆ ಕಣ್ಣಂಚಿನ
    ನೀರಹನಿ.
    ಬಹು ಹಿಡಿಸಿದವು...

    ಪ್ರತ್ಯುತ್ತರಅಳಿಸಿ
  2. ಎಷ್ಟು ಚಂದ ಬರದ್ಯೋ ಮಾರಾಯಾ. ನಿನ್ನ ಕವಿತೆ ಓದ್ತಾ ಓದ್ತಾ ಅದ್ರಲ್ಲೇ ನಾ ಕಳೆದ್ ಹೋದ್ನಲೋ.......

    ಪ್ರತ್ಯುತ್ತರಅಳಿಸಿ
  3. ಜಿ .ಜಿ ಸುಂದರವಾದ ಕವನ ತುಂಬಾ ಖುಶಿ ಕೊಟ್ಟಿತು.

    ಪ್ರತ್ಯುತ್ತರಅಳಿಸಿ
  4. Horaganna tegeyade olaganna teredu nodidare alle ide nooru kaamana billina belakina bergu. kavite chennagide. nanna blogspotge visit kodi. DR.D.T.KRISHNA MURTHY.

    ಪ್ರತ್ಯುತ್ತರಅಳಿಸಿ