ಕೋಳಿ ಕೂಗಿನೋದಿಗೆ ಬೆಳಗಾಯಿತೋ,
ಬೆಳಿಗ್ಗೆ ಕೋಳಿ ಕೂಗಿತೋ,
ಬೆಳಗಾಗಿತ್ತು!
ಸೂರ್ಯ ಮೂಡಿದ್ದ ,
ರಾತ್ರಿ ಮುಗಿದ ಮೇಲಿನ ಬೆಳಗು,
ನಿದ್ರೆ ಮುಗಿದ
ಜಗದಳವು.
ಮೈ ಮುರಿಯಲ್ಲಿಲ್ಲ
ಮೈ ಮರೆಯಲಿಲ್ಲ
ಡಂಗುರ ಸಾರಲಿಲ್ಲ,
ದಾರಿ ಕಾಯಲಿಲ್ಲ
ದಾರಿ ಕೇಳಲಿಲ್ಲ
ಬೆಳಗಾಗಿದೆ.
ದಿನವೊಂದು ಉದಯಿಸಿದೆ,
ದಿನವೊಂದು ಮರಣಿಸಿದೆ,
ಹಳೆಯದರೊಂದಿಗೆ
ಹೊಸತುದಯಿಸಿದೆ.
ಎಲ್ಲವೂ ಹೊಸತು ಎಲ್ಲವೂ ಹಳತು ,
ನಿನ್ನೆಯೊಂದಿಗಿನ
ಬದಕು ಸೊಗಸು.
ರಾತ್ರಿ ಕಂಡಂತಹ ಭಾವಿ
ಹಗಲು ಧುಮುಕುವ
ಕನಸು.
ಬನ್ನಿ ಬದುಕೋಣ,
ಹೊಸ ದಿನಗಳೊಂದಿಗೆ,
ಹಳೆಯ ನೆನಪುಗಳೊಂದಿಗೆ.
ಇಂದಿಗೆ ಮುಗಿದಿಲ್ಲ ,
ನಾಳೆಗೆ ನಿಲ್ಲದು
ಮೊಗೆದಷ್ಟು
ಮುಗಿಯದ ಶರಧಿ.
ಮತ್ತೆ ರಾತ್ರಿಯಾಗುತ್ತಿದೆ ,
ಬೆಳಗಾಗಲು.
ಬನ್ನಿ ಬದುಕೋಣ,ಹೊಸ ದಿನಗಳೊಂದಿಗೆ, ಹಳೆಯ ನೆನಪುಗಳೊಂದಿಗೆ....ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿdosta ee ratryallu blog veekshane. dhanyavada.
ಪ್ರತ್ಯುತ್ತರಅಳಿಸಿGGH sir,
ಪ್ರತ್ಯುತ್ತರಅಳಿಸಿಸುಂದರ ಕವನ........