ಕೈಮರ |
ನಿಂತಿದ್ದೇನೆ ಕೂಡು ರಸ್ತೆಯ ಮದ್ಯೆ.
ಮುಂದೆ ಹತ್ತಾರು ದಾರಿಗಳು
ದಾರಿ ತಪ್ಪಿಸುತ್ತಿವೆ
ಎಲ್ಲಿಗೋಗಲಿ' ಎಲ್ಲಿಸಾಗುತ್ತಿವೆ ಈ ದಾರಿಗಳು?
ಕೈಮರದ ಕೆಳಗೆ ನಿಂತಿದ್ದೇನೆ ಒಂಟಿಯಾಗಿ,
ದಾರಿಹೋಕರಿಲ್ಲ,
ದಾರಿತೋರುವರಿಲ್ಲ,
ನನ್ನಳವು ಕೇಳುವರಿಲ್ಲ.
ಬಯಸಿದ್ದೇನೆ ಸಾಗಲು
ದಾರಿಗಳು ಹತ್ತಾರು
ಹೇಗೆ ಸಾಗಲಿ?
ಅಲ್ಲಿ ಇಲ್ಲಿ ಎಲ್ಲೆಲ್ಲು
ದಾರಿಗಳು
ಎಲ್ಲೆಲ್ಲು ನನ್ನದೇ
ಗುರಿ
ದಶದಿಕ್ಕು ತೋರುತ್ತಿದೆ
ಜಗದಳವು.
ಮುಂದೆ ನಿಂತಿದೀ
ಬಯಲು ನನ್ನಳಗೊಂದಾಗಿ ,
ಎಲ್ಲೆಲ್ಲು ಜಗಮಗಿಸುವ ದೀಪವಾಗಿ.
ನಾನು ನಾನಾಗಿ ,
ಸರ್ವವು ಅಯೋಮಯವಾಗಿ
ಆದಿ ಅಂತ್ಯವಿಲ್ಲದಾ
ದಿಕ್ಕಾಗಿ ಅಯ್ಕ್ಯವಾಗಿದೆ .
ಎಲ್ಲಿ ಹೋಗಲಿ ನಾನು?
ಜಿ.ಜಿ.ಹೆಗ್ಡೆಯವರೇ;ಇದು ನಮ್ಮೆಲ್ಲರ ಪರಿಸ್ಥಿತಿಯ ಕವನ.ಈ ಹಾದಿಯಲ್ಲಿ ನಾವೆಲ್ಲಾ ಸಾಗಲೇ ಬೇಕಲ್ಲಾ!ಒಳ್ಳೆಯ ಕವನ.ಧನ್ಯವಾದಗಳು.
ಪ್ರತ್ಯುತ್ತರಅಳಿಸಿಜೀವನದ ದಾರಿಯಲ್ಲಿ ಸಾಗುವಾಗ ಆಗಾಗ ಅನೇಕ ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ.
ಪ್ರತ್ಯುತ್ತರಅಳಿಸಿಕೆಲವು ಉತ್ತರಗಳು ಸಿಕ್ಕಿಬಿಡುತ್ತವೆ ಕೆಲವು ಪ್ರಶ್ನೆಯಾಗಿಯೆ ಉಳಿದುಬಿಡುತ್ತವೆ.
ಮನುಷ್ಯನ ಜೀವನದ ಪಯಣ ಮಾತ್ರಾ ಇದೆಲ್ಲದರೊಡನೆ ಸಾಗುತ್ತಲೇ ಇರಬೇಕು..ಅಲ್ಲವೇ?
ಚೆನ್ನಾಗಿ ಬರೆದಿದ್ದೀರಿ.