ಭಾನುವಾರ, ಜೂನ್ 20, 2010

NIMMA NADUVINA NAANU

ಕೋಟಿ ಜನರ ಮದ್ಯೆ  ಒಂಟಿಯಾಗಿದ್ದೇನೆ,
ಧಾವಿಸುವ ನದಿಯಲ್ಲಿನ ಬಿಂದುವಾಗಿದ್ದೇನೆ,
ಉರಿವ ಸೂರ್ಯನಲ್ಲಿಯ ಕಿಡಿಯಾಗಿದ್ದೇನೆ,
ಆದರೂ ನಾನು ನಾನಾಗಿದ್ದೇನೆ.

ಕಿವಿಗೊಟ್ಟು ಕೇಳಿ,
ನಾನು ಮಾತನಾಡುವುದಿಲ್ಲ,
ಕಥೆ ಹೇಳುವುದಿಲ್ಲ ,
ಮೌನದೊಂದಿಗೆ
ಮೌನಿಯಾಗಿದ್ದೇನೆ.

ಅಲ್ಲಿದಿಲ್ಲಿಯ ಮಾತು,
ಪಿಸುಗುಟ್ಟುವ ಗಾಳಿ,
ನಿತ್ಯವೂ ಸತ್ತುಬದುಕುವ,
ಅನಿವಾರ್ಯತೆ,
ಸುತ್ತ ಸುಳಿಯುವ ನೆನಪು,
ಅತ್ತುಕರೆಯುವ ಗೋಳು ,
ಅದೇ ಸ್ವರ್ಗ ನರಕಗಳ
ಉರಿವ ಹಣತೆ .

ಹುಡುಕದಿರಿ ನನ್ನನ್ನ
ಕೋಟಿ ಜನಗಳ ಮದ್ಯೆ
ಎಲ್ಲಿಯೂ ಬಿಟ್ಟಿಲ್ಲ ಹೆಜ್ಜೆ ಗುರುತು .
ಉರಿವ ಚಿತೆಗಳ ಮದ್ಯೆ
ಭಸ್ಮವಾಗಿಹ ನೆನಪು,
ಗೋರಿಗಳ  ಮಣ್ಣಲ್ಲಿ
ಕರಗಿಹೋಗಿ.

ಅಲ್ಲಿಲ್ಲಿ  ಯಾಕೆ ?
ನಿಮ್ಮನಡುವಿದ್ದೇನೆ
ನಿಮ್ಮಲ್ಲಿಯೇ ಇದ್ದೇನೆ,
ಸದಾ ಒಂಟಿಯಾಗಿ.

6 ಕಾಮೆಂಟ್‌ಗಳು:

  1. G.G.HEGDE;ಬಹಳ ದಿನಗಳ ಮೇಲೆ ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ.ಕವನ
    ಚೆನ್ನಾಗಿದೆ.ನನ್ನ ಬ್ಲಾಗಿಗೂ ಬರುತ್ತಿರಿ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಸರ್ ಕವನ ತುಂಬಾ ಚನ್ನಾಗಿದೆ.

    ಉರಿವ ಚಿತೆಗಳ ಮದ್ಯೆ
    ಭಸ್ಮವಾಗಿಹ ನೆನಪು,
    ಗೋರಿಗಳ ಮಣ್ಣಲ್ಲಿ
    ಕರಗಿಹೋಗಿ.

    ಒಂಟಿ ತನದಲ್ಲಿ ಬದುಕನ್ನು ಬಿಂಬಿಸಿರುವ ರೀತಿ ತುಂಬಾ ಚನ್ನಾಗಿದೆ.

    ಪ್ರತ್ಯುತ್ತರಅಳಿಸಿ
  3. ದೋಸ್ತ,
    ಮತ್ತೊಂದು ಉತ್ಕೃಷ್ಟ ಕವನ ನೀಡಿದ್ದಕ್ಕೆ ಆಭಾರಿ.

    ಪ್ರತ್ಯುತ್ತರಅಳಿಸಿ
  4. ವಾವ್!
    ಸುಂದರ ಕವನ.......
    ಅರ್ಥಪೂರ್ಣ ಪದಗಳ ಬಳಕೆಯೊಂದಿಗೆ ಕವನ ಚೆನ್ನಾಗಿ ಮೂಡಿ ಬಂದಿದೆ......

    ಪ್ರತ್ಯುತ್ತರಅಳಿಸಿ
  5. ಕೆಲವೊಮ್ಮೆ ಯಾರಿದ್ದರೂ ನಾವು ಒಂಟಿಯೇ ! ಕವನ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ